Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮೈನಾ` ರೀಲ್ ಹಾಗೂ ರಿಯಲ್ ಮಿಲನ
Posted date: 22 Thu, Mar 2012 ? 10:48:30 AM

ಇದೊಂದು ಅಪರೂಪದ ಗಳಿಗೆ ’ಮೈನಾ’ ಚಿತ್ರಕ್ಕೆ ಒದಗಿ ಬಂದಿದೆ. ನಿಜ ಜೀವನದ ಟೈಗರ್ ಕಾಪ್ ಬಿ.ಬಿ. ಅಶೋಕ್ ಕುಮಾರ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಶರತ್ ಕುಮಾರ್ ಒಟ್ಟಿಗೆ ಕುಳಿತು ನಿರ್ಮಾಪಕ ರಾಜ್‌ಕುಮಾರ್ ಅವರ ’ಮೈನಾ’ ಚಿತ್ರದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು ಮಂಗಳವಾರ ಸಂಜೆ. ಅದೊಂದು ಕುಮಾರ್ ತ್ರಯರ ಸಂಗಮವೇ ಆಗಿತ್ತು. ’ಮೈನಾ’ ಚಿತ್ರದ ನಿರ್ದೇಶಕ ನಾಗಶೇಖರ್ ವೇದಿಕೆಯಲ್ಲಿ ಕುಳಿತುಕೊಳ್ಳದೆ ಅತಿಥಿಗಳನ್ನು ಆಹ್ವಾನಿಸಿದರು.

ಮೊದಲ ಬಾರಿಗೆ ನಿಜ ಜೀವನದ ಕಥೆಯಾದಾರಿತ ಪಾತ್ರದಲ್ಲಿ ಅಭಿನಯಿಸುತ್ತಿರುವ ಶರತ್‌ಕುಮಾರ್ ಮಾತನಾಡುತ್ತಾ ವೃತ್ತಿ ಜೀವನದಲ್ಲಿ ೧೩೦ ಸಿನಿಮಾಗಳಲ್ಲಿ ಏನಿಲ್ಲವೆಂದರೂ ೨೫ ಸಿನಿಮಾಗಳಲ್ಲಿ ಪೋಲಿಸ್ ಅಧಿಕಾರಿಯಾಗಿ ಪಾತ್ರ ಮಾಡಿರುವುದಕ್ಕೂ ಹಾಗೂ ಈ ಕನ್ನಡ ಚಿತ್ರದ ಪೋಲಿಸ್ ಅಧಿಕಾರಿ ಪಾತ್ರಕ್ಕೂ ಬಹಳವೇ ವ್ಯತ್ಯಾಸವಿದೆ ಎನ್ನುತ್ತಾರೆ. ’ಸಾರಥಿ’ ನಂತರ ಎರಡನೇ ಕನ್ನಡ ಸಿನಿಮಾದಲ್ಲಿ ಕೂರ್ಗ್ ಮೂಲದ ಬಿ.ಬಿ. ಅಶೋಕ್ ಕುಮಾರ್ ಅವರನ್ನು ಹೋಲುವಂತೆ ಪಾತ್ರ ನಿರ್ವಹಿಸಬೇಕಿದೆ. ಈ ಚಿತ್ರದ ಕಥಾವಸ್ತು ಒಪ್ಪಿಕೊಳ್ಳಲು ನಿರ್ದೇಶಕ ನಾಗಶೇಖರ್ ನನ್ನ ಸ್ಥಿರ ಚಿತ್ರಗಳನ್ನೇ ಇಟ್ಟುಕೊಂಡು ಐಪಾಡ್ ಮೂಲಕ ತೋರಿಸಿದ ವಿಶುಯಲ್ಸ್ ನನಗೆ ಮತ್ತೊಬ್ಬ ಖ್ಯಾತ ನಿರ್ದೇಶಕ ಗೌತಮ್ ಮೆನನ್ ಅವರನ್ನು ಜ್ಞಾಪಕಕ್ಕೆ ತಂದಿತು. ಸಿನಿಮಾ ಮಾಧ್ಯಮ ಎಂಬುದು ಪ್ರಬಲವಾದದ್ದು. ಕನ್ನಡ ಸಿನಿಮಾದಲ್ಲಿ ಬೇರೆ ಭಾಷೆಯ ನಟರಿಗೆ ಅವಕಾಶ ನೀಡುತ್ತಿರುವುದು ಸ್ವಾಗತಾರ್ಹ ಎಂದ ಶರತ್ ಕುಮಾರ್ ’ಮೈನಾ’ ಚಿತ್ರದ ಮುಹೂರ್ತದಂದು - ಮಾರ್ಚ್ ೨೩ ರಂದು ರಜನಿಕಾಂತ್ ಅವರ ’ಕೊಚಾಡಿಯನ್’ ಸಿನಿಮಾ ಚಿತ್ರೀಕರಣ ಲಂಡನ್‌ನಲ್ಲಿ ಇರುವುದರಿಂದ ಇಂದೇ ಮಾಧ್ಯಮದವರನ್ನು ಭೇಟಿ ಮಾಡಲು ಅವಕಾಶವಾಯಿತು ಎಂದರು. ನಿಜ ಜೀವನದ ಅಧಿಕಾರಿ ತೊಟ್ಟಿರುವ ಕ್ಯಾಪ್ ಹಾಗೂ ಭರ್ಜರಿ ಮೀಸೆಯನ್ನು ಸಿನಿಮಾಕ್ಕಾಗಿ ಇಟ್ಟುಕೊಳ್ಳಲಿದ್ದೇನೆ ಎಂದರು ಶರತ್ ಕುಮಾರ್. ಬಿ.ಬಿ. ಅಶೋಕ್ ಕುಮಾರ್ ಮಾತುಗಳನ್ನು ಆಲಿಸಿದ ನಟ ಶರತ್ ಕುಮಾರ್ ಹಲವು ಹೋಲಿಕೆಗಳನ್ನು ಹೇಳಿಕೊಂಡರು.

ಕರ್ನಾಟಕ ಕಂಡ ಅದ್ಭುತ ಪೋಲಿಸ್ ಅಧಿಕಾರಿ ಟೈಗರ್ ಕಾಪ್ ಬಿ.ಬಿ. ಅಶೋಕ್ ಕುಮಾರ್ ಇನ್ನೇನು ೫ ತಿಂಗಳಲ್ಲಿ ಸೇವೆಯಿಂದ ನಿವೃತ್ತಿಯಾಗುತ್ತಿರುವುದನ್ನು ಹೇಳಿಕೊಳ್ಳುತ್ತಾ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು. ಇದುವರೆವಿಗೂ ೧೦೦ಕ್ಕೂ ಹೆಚ್ಚು ಮರ್ಡರ್ ಕೇಸುಗಳನ್ನು ಭೇದಿಸಿರುವ ಹಾಗೂ ೧೮ ಎನ್‌ಕೌಂಟರ್‌ಗಳನ್ನು ಮಾಡಿರುವ ಅಶೋಕ್ ಕುಮಾರ್ ಅವರ ಜೀವನದ ಸತ್ಯ ಘಟನೆಯನ್ನು ನಿರ್ದೇಶಕ ನಾಗಶೇಖರ್ ಅವರಿಗೆ ಹೇಳಿದಾಗ ಪೋಲಿಸ್ ಅಧಿಕಾರಿಗಳಿಗೂ ಮಾನವೀಯತೆ ಹೃದಯದಲ್ಲಿ ಇರಲೇಬೇಕು ಎಂದು ಸ್ಪಷ್ಟಪಡಿಸಿದರಂತೆ. ಈ ಚಿತ್ರಕ್ಕೆ ಒದಗಿಸಿರುವ ಘಟನೆಯನ್ನು ಬಿಚ್ಚಿಡುತ್ತಾ ಸಂಘರ್ಷದ ಜೊತೆ ಪ್ರೀತಿಯೂ ಇತ್ತು ಹಾಗಾಗಿ ಇದು ಸಿನಿಮಾಕ್ಕೆ ಆಪ್ಯಾಯಮಾನವಾಯಿತು ಎಂದರು ಅಶೋಕ್ ಕುಮಾರ್. ನಿರ್ದೇಶಕ ನಾಗಶೇಖರ್ ಅವರ ೨ ಸಿನಿಮಾಗಳನ್ನು ನೋಡಿರುವುದಾಗಿ ಹೇಳಿದ ಅವರು ಶರತ್ ಕುಮಾರ್ ಅವರ ಪಾತ್ರಕ್ಕೆ ಪೋಲಿಸ್ ಅಧಿಕಾರಿಯ ಉಡುಪುಗಳನ್ನು ತಾವೇ ನಿರ್ಧರಿಸಿ ಅವರ ೩ ರಾಷ್ಟ್ರಪತಿ ಪದಕಗಳನ್ನು ಈ ಸಿನಿಮಾದ ಚಿತ್ರೀಕರಣಕ್ಕಾಗಿ ತೊಡಿಸುವುದಾಗಿ ಸಂತೋಷದಿಂದ ಹೇಳಿಕೊಂಡರು. ಪೋಲಿಸ್ ವೃತ್ತಿಬಾಂಧವರಿಗೆ ದರ್ಪ, ಅಹಂಕಾರ ಕಾಪಾಡುವುದಿಲ್ಲ, ಏನಿದ್ದರೂ ಪ್ರೀತಿ, ವಿಶ್ವಾಸವೇ ಮುಖ್ಯ ಎಂದು ಕಿವಿ ಮಾತು ಹೇಳಿದರು ಬಿ.ಬಿ. ಅಶೋಕ್ ಕುಮಾರ್.  

GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮೈನಾ` ರೀಲ್ ಹಾಗೂ ರಿಯಲ್ ಮಿಲನ - Chitratara.com
Copyright 2009 chitratara.com Reproduction is forbidden unless authorized. All rights reserved.